ಶ್ರೀ ಶಿವ ಶರಣ ಮಲ್ಲಯ್ಯ ತಾತನವರ ಜಾತ್ರಾ ಮಹೋತ್ಸವ. ಕನಕಗಿರಿ
ಶ್ರೀ ಶಿವ ಶರಣ ಮಲ್ಲಯ್ಯ ತಾತನವರ ಜಾತ್ರಾ ಮಹೋತ್ಸವ
ಕನಕಗಿರಿ ಪಟ್ಟಣದ ಶಿವಶರಣ ಹಾಗೂ ಪವಾಡಪುರುಷ ವಾಗಿರುವ ಶ್ರೀ ಸದ್ಗುರು ಸಮಗಂಡಿ ಮಲ್ಲಯ್ಯತಾತ ಜಾತ್ರೆಯಲ್ಲಿ ಮಗು ವಿಜ್ರಂಭಣೆಯಿಂದ ಜರುಗಿತು.
ನಂತರ ಮಾತನಾಡಿದ ಅವರ ಕುಟುಂಬಸ್ಥರ ಆಗ ಮಗಂಡಿ ವೀರೇಶ್ ಅವರು ಸತತವಾಗಿ ಶಿವಶರಣ ಸದ್ಗುರು ಸಮಗಂಡಿ ಶ್ರೀ ಮಲ್ಲಯ್ಯತಾತನವರ ಜಾತ್ರಾ ಮಹೋತ್ಸವ ಶ್ರೀ ಶಕೆ 1946ನೇ ಕ್ರೋದಿನಾಮ ಸಂವತ್ಸರದ ಶ್ರಾವಣ ಮಾಸದ ಬ॥ 14 ರವಿವಾರ ದಿನಾಂಕ 01-09-2024 ರಂದು ರಾತ್ರಿ ಶ್ರೀ ತಾತನವರ ಗದ್ದುಗೆ ಸ್ಥಳದಲ್ಲಿ ಕನಕಗಿರಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮಗಳು ಜರುಗುವವು ಒಂದು ತಿಳಿಸಿದರು.
ಹಾಗೂ ಸೋಮವಾರ ದಂದು ಬೆನಕನ ಅಮವಾಸ್ಯೆ ದಿವಸ ಬ್ರಾಹ್ಮ ಮುಹೂರ್ತದಲ್ಲಿ ಶ್ರೀ ತಾತನವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಾಡಲಾಗುವುದು.ಸಕಲ ಸದ್ಭಕ್ತರು ಹಾಗೂ ಭಜನಾ ಮಂಡಳಿಯವರು ಶ್ರೀ ತಾತನವರ ರುದ್ರಾಭಿಷೇಕದ ಶುಭ ಸಮಯದಲ್ಲಿ ಭಾಗಿಗಳಾಗಿ ತಮ್ಮ ತನು ಮನದಿಂದ ಭಕ್ತಿಯ ಸೇವೆ ಸಲ್ಲಿಸಿ ಶ್ರೀ ತಾತನವರ ದರ್ಶನ ಭಾಗ್ಯ ಪಡೆಯುತ್ತಾರೆ.ನಂತರ ಸಕಲ ಭಕ್ತಭಿಮಾನಿಗಳಿಗೆ ಶ್ರೀ ತಾತನವರ ಸನ್ನಿಧಿಯ ಸ್ಥಳದಲ್ಲಿ ಪ್ರಸಾದ (ಅನ್ನ ಸಂತರ್ಪಣೆ) ಜರುಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಶಾಸಕರಾದ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ್ ತಂಗಡಗಿ ಅವರ ಸಹೋದರ ರವಿ ತಂಗಡಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಗಂಗಾಧರ್ ಸ್ವಾಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೀರೇಶ್ ರಮಗಂಡಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸಂತ್ ಗೌಡ ಪಾಟೀಲ್ ಮಾದ್ನಾಳ್ ಪಟ್ಟಣ ಪಂಚಾಯಿತಿ ಸದಸ್ಯರಾದ ರಾಕೇಶ್ ಕಂಪ್ಲಿ ಕಂಠಿರಂಗ ನಾಯಕ್ ನಂದಾಪುರ ರಾಜ ಅನಿಲ್ ಬೀ ಪ್ರಮುಖರಾದ ಸದಾನಂದ ಸಮಗಂಡಿ ಟಿ ಜಿ ರಾಜಶೇಖರ್ ನಾಗರಾಜ್ ಬೋಂಡಾಡಿ ಶಾಂತಪ್ಪ ಬಸಿರ ಗಿಡ ಹೊನ್ನೂರ್ ಸಾಬ್ ಪಟ್ಟಣದ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ…..




