ಸಂಪಾದಕೀಯ

ಕನಕಚಲಪತಿ ದೇವಸ್ಥಾನದ ಪುಷ್ಕರಣಿ ಕೊಂಡದ ಹೊಲ ಸರ್ವೆ ನಂಬರ್ 45 ಗುಳುಂ..!

ಕನಕಚಲಪತಿ ದೇವಸ್ಥಾನದ ಪುಷ್ಕರಣಿ ಕೊಂಡದ ಹೊಲ ಸರ್ವೆ ನಂಬರ್ 45 ಗುಳುಂ..!

ಕಣ್ಣು ಮುಚ್ಚಿ ಕುಳಿತ ದೇವಸ್ಥಾನದ ಆಡಳಿತ ಅಧಿಕಾರಿ ತಹಸಿಲ್ದಾರ್ ಮತ್ತು ವ್ಯವಸ್ಥಾಪನ ಸಮಿತಿಯರು*

ಕನಕಗಿರಿಯ ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು ಇದಕ್ಕೆ ಎರಡನೇ ತಿರುಪತಿ ಎಂದು ಕರೆಯುತ್ತಾರೆ ಗುಜ್ಜಲ ವಂಶದ ದೊರೆಗಳಾದ ಕೆಲವಡಿ ಉಡಿಚಪ್ಪ ನಾಯಕನ ಕಾಲದಲ್ಲಿ 16ನೇ ಶತಮಾನದಲ್ಲಿ ಕನಕಗಿರಿಯ ದೇವಸ್ಥಾನದ ಉತ್ತರ ದಿಕ್ಕಿನಲ್ಲಿರುವ ಸರ್ವೇ ನಂಬರ್ 45ರಲ್ಲಿ ಪುಷ್ಕರಣಿ ( ಕೊಂಡ ) ಮತ್ತು ಅಲ್ಲಿ ಶ್ರೀ ವೆಂಕಟರಮಣ ಗುಡಿ, ವರಹ ಸ್ವಾಮಿ ಗುಡಿ, ಅಮೃತೇಶ್ವರ ದೇವಸ್ಥಾನ, ಗರುಡ ದೇವರ ಗುಡಿ, ಕನಕ ಮುನಿ ಗುಡಿ, ಎಲ್ಲಮ್ಮ ದೇವರ ಗುಡಿ, ( ಚಿಗರಿ ಕಟ್ಟೆ ) ಉಚ್ಚೆಯ ಇಳಿಸುವ ಕಟ್ಟೆ ಇನ್ನು ಅನೇಕ ಪುರಾತನ ಸ್ಮಾರಕಗಳು ದೇವಾಲಯಗಳು ಅಲ್ಲಿ ಇವೆ. ಪುಷ್ಕರಣಿಯಲ್ಲಿ, ಜಾತ್ರಾ ಕಾಲದಲ್ಲಿ, ಮತ್ತು ಬಿಡಿ ದಿನಗಳಲ್ಲಿ ತಲೆಮಂಡೆ ಕೊಟ್ಟು ಸ್ನಾನಮಾಡಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಪುಷ್ಕರಣಿಯಲ್ಲಿ ತೆಪ್ಪೋತ್ಸವ, ಕಾರ್ತಿಕ ದೀಪೋತ್ಸವ, ಶ್ರೀ ಕನಕಾಚಲಪತಿ ದೇವರ ಚಕ್ರ ಸ್ನಾನ, ಅವಬೃತ ಸ್ನಾನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲಿಗೆ ಹೋಗುವ ಭಕ್ತರಿಗೆ ಸಾರ್ವಜನಿಕರಿಗೆ ಉತ್ಸವಗಳು ಹೋಗಬಾರದೆಂದು ದೌರ್ಜನ್ಯದಿಂದ ಒಡ್ಡು ಹಾಕಿ ಭಕ್ತರಿಗೆ ಬಾಯಿಗೆ ಬಂದಂತೆ ಆಕ್ರಮಿತರು ಬೈದು ಅವರ ಸಂಗಡ ಜಗಳ ಮಾಡುತ್ತಾರೆ. ಸರ್ವೇ ನಂಬರ್ 45 ಕೊಂಡದ ಹೊಲ ( ಪುಷ್ಕರಣಿ ) ಇದು ಶ್ರೀ ಕನಕಾಚಲ ದೇವಸ್ಥಾನ ಕ್ಕೆ ಸಂಬಂಧಪಟ್ಟಿರುತ್ತದೆ ಇಷ್ಟೆಲ್ಲಾ ಭಕ್ತರಿಗೆ ತೊಂದರೆಯಾದರೂ ದೇವಸ್ಥಾನದ ಆಡಳಿತ ಅಧಿಕಾರಿಯಾದ ತಹಸೀಲ್ದಾರರು ಮತ್ತು ವ್ಯವಸ್ಥಾಪನ ಸಮಿತಿಯವರು ಏನು ಗೊತ್ತಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕೂಡಲೇ ಈಗಲಾದರೂ ಆಡಳಿತಾಧಿಕಾರಿಗಳಾದ ತಹಸಿಲ್ದಾರರು ಎಚ್ಚೆತ್ತು ಕೊಂಡದ ಹೊಲವನ್ನು ಮರಳಿ ದೇವಸ್ಥಾನಕ್ಕೆ ಪಡೆದು ಸಾರ್ವಜನಿಕರಿಗೂ ಭಕ್ತರಿಗೂ ಆಗುವ ತೊಂದರೆಗಳನ್ನು ಶೀಘ್ರ ಪರಿಹರಿಸಿ ಅದರಲ್ಲಿರುವ ಎಲ್ಲಾ ಸ್ಮಾರಕಗಳನ್ನು ಒತ್ತುವರೆಯಿಂದ ತೆರವುಗೊಳಿಸಿ ದೇವಸ್ಥಾನದ ಆಸ್ತಿ ಕೊಂಡದ ಹೊಲ ಮತ್ತು ಅಲ್ಲಿರುವ ಪುರಾತನ ಸ್ಮಾರಕಗಳನ್ನು ರಕ್ಷಿಸಬೇಕೆಂದು ಸಾರ್ವಜನಿಕ ಭಕ್ತಾದಿಗಳು ಒತ್ತಾಯಿಸಿದ್ದಾರೆ.

ಬಾಕ್ಸ್ 1

ಆಡಳಿತ ಅಧಿಕಾರಿಗಳು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿರ್ಲಕ್ಷದಿಂದ ದೇವಸ್ಥಾನದ ಪುಷ್ಕರಣಿ ಹಾಗೂ ಹಲವಾರು ಹಳೆಯ ಸ್ಮಾರಕಗಳು ಹೊತ್ತುವರಿ ಆಗಿದ್ದು ದನಗಳ ಕೊಠಡಿ ಆಗಿದೆ. ಇದನ್ನು ಅಧಿಕಾರಿಗಳು ಜಾಗೃತಿ ಕೊಂಡು ತುರ್ತಾಗಿ ತೆರವು ಗೊಳಿಸಬೇಕು

ದುರ್ಗಾ ದಾಸ್ ಯಾದವ್ ಕನಕಗಿರಿ
ಇತಿಹಾಸಕಾರರು ಮತ್ತು ಸಾಮಾಜಿಕ ಹೋರಾಟಗಾರರು.

ಬಾಕ್ಸ್ 2

ಇದನ್ನು ಪರಿಶೀಲಿಸಿ ಹಾಗೂ ಪುಷ್ಕರಣಿ ಮತ್ತು ಪುರಾತನ ಸ್ಮಾರಕಗಳ ಸ್ಥಳವನ್ನು ಸರ್ವೆ ಮಾಡಿಸಿ ಒಂದು ವಾರದ ಒಳಗಡೆ ಹಿಂಪಡೆಯಲಾಗುವುದು

ಕನಕಗಿರಿ ತಹಶೀಲ್ದಾರ್ ಮತ್ತು ದೇವಸ್ಥಾನದ ಆಡಳಿತ ಅಧಿಕಾರಿಗಳು ವಿಶ್ವನಾಥ್ ಮುರುಡಿ.

Related Articles

Leave a Reply

Your email address will not be published. Required fields are marked *

Back to top button