ಸುದ್ಧಿ

ಕುರಿ ಮಾರುಕಟ್ಟೆಯನ್ನು APMC ಮಾರುಕಟ್ಟೆಯ ಒಳಭಾಗದಲ್ಲಿ ಮಾಡಬೇಕು. ವಾಸಪ್ಪ ಎಂ , ಅಧ್ಯಕ್ಷರು ಹೊನ್ನಾಳಿ

ಹೊನ್ನಾಳಿಯಲ್ಲಿ ಪುರಸಭೆಯ ಮೂಲಕ ಪ್ರತೀ ಬುಧವಾರ ನೆಡೆಯುವ ಕುರಿ ಮಾರುಕಟ್ಟೆಯನ್ನು ಸರ್ಕಾರಿ ಆಸ್ಪತ್ರೆಯ ಪಕ್ಕದ ಮಾರಿಕೊಪ್ಪದ ರಸ್ತೆಯಲ್ಲಿ ಪಾರ್ಕ್ ಗಾಗಿ ಕಾಯ್ದಿರುಸಿರುವ ಜಾಗದಲ್ಲಿ ತಾತ್ಕಾಲಿಕವಾಗಿ ಮಾಡಿದ್ದಾರೆ ಎಂದು ಪುರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ , ನಮ್ಮ ಒಂದು ಸಲಹೆ ಏನೆಂದರೆ ಈ ಕುರಿ ಮಾರುಕಟ್ಟೆಯನ್ನು APMC ಮಾರುಕಟ್ಟೆಯ ಒಳಭಾಗದಲ್ಲಿ ಮಾಡಬೇಕು ಎನ್ನುವುದು , ಇಲ್ಲಿ ಮಾಡುವುದರಿಂದ ಎಲ್ಲಾ ರೀತಿಯಲ್ಲಿ ಅನುಕೂಲವಾಗುತ್ತೆ , ಇಲ್ಲಿ ನೀರಿನ ವ್ಯವಸ್ಥೆ ಇದೆ , ನೆರಳಿಗೆ ಗಿಡಮರಗಳು ಇವೆ , ಮೈನ್ ರಸ್ತೆ ಇರುವುದರಿಂದ ಬರುವವರೆಗೂ ಹೋಗುವವರಿಗೂ ಅನುಕೂಲ ವಾಗುತ್ತೆ , ಗಡಿಗಳನ್ನು ನಿಲ್ಲಿಸುವುದಕ್ಕೂ ಒಳಗಡೆ ಬೇಕಾದಷ್ಟು ಜಾಗವಿದೆ ಹಾಗಾಗಿ ಹೊನ್ನಾಳಿಯ APMC ಮಾರುಕಟ್ಟೆಯಲ್ಲಿ ಶಾಶ್ವತವಾಗಿ ಕುರಿ ಮಾರುಕಟ್ಟೆಯನ್ನು ಸ್ಥಳಾಂತರಿಸಿದರು ಎಲ್ಲರಿಗೂ , ಎಲ್ಲಾದಕ್ಕೂ ಅನುಕೂಲ ವಾಗುತ್ತೆ ,ಒಳ್ಳೆಯದಾಗುತ್ತೆ ಎಂದು ಈ ಮೂಲಕ ತಿಳಿಯ ಬಯಸುತ್ತಿದ್ದೇನೆ , ಇಂದ :- ಮಾಜಿ ಸೈನಿಕರಾದ ವಾಸಪ್ಪ ಎಂ , ಅಧ್ಯಕ್ಷರು ಹೊನ್ನಾಳಿ ಕಸಬಾ ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ( ನಿ) ಹೊನ್ನಾಳಿ ತಾ, ದಾವಣಗೆರೆ

Related Articles

Leave a Reply

Your email address will not be published. Required fields are marked *

Back to top button